ಕರ್ನಾಟಕ ರಾಜ್ಯ ವಾರ್ತೆ

Sandalwood News: Kannada Cinema, Film, Movie Reviews News | Vijaya Karnataka Sandalwood News: Get latest kannada news paper cinema news updates, kannada cine industry breaking news, sandalwood celebrities gossip news in kannada on Vijaya Karnataka

Karnataka District News | Karnataka Latest & Breaking News Karnataka District News in Kannada – Bangalore, Mysore, Belagavi, Mangalore, Shivamogga & more News in Kannada News Paper Vijaya Karnataka

ರಾಶಿ ಭವಿಷ್ಯ: Astrology in Kannada | Kannada Rashi Bhavishya – Vijaya Karnataka Astrology in Kannada: Read ರಾಶಿ ಭವಿಷ್ಯ/Dina rashi bhavishya in Kannada by birth date & time, horoscope in Kannada, Jataka in Kannada, Jataka matching & much more on Vijaya Karnataka

 • Nithya Bhavishya: ಮೇಷ ರಾಶಿಯವರೇ ಆರ್ಥಿಕ ಬಿಕ್ಕಟ್ಟಿಗೆ ವೆಚ್ಚಗಳ ನಿಯಂತ್ರಣವೇ ಪರಿಹಾರ..!
  on September 20, 2020 at 12:31 am

  ಸೆಪ್ಟೆಂಬರ್‌ 20, ಭಾನುವಾರದ ದಿನವಾದ ಇಂದು ಚಂದ್ರನ ಸಂಚಾರವು ತುಲಾ ರಾಶಿಯಲ್ಲಿ ನಡೆಯಲಿದೆ. ಈ ರಾಶಿಯಲ್ಲಿ ಚಲಿಸುವ ಚಂದ್ರನು ಮಿಥುನ ರಾಶಿಯವರಿಗೆ ಪ್ರಯೋಜನಕಾರಿ ಯೋಗವನ್ನು ಸೃಷ್ಟಿಸುತ್ತಾನೆ. ಚಂದ್ರ ಮತ್ತು ಶುಕ್ರನ ನಡುವೆ ರಾಶಿ ಬದಲಾವಣೆಯ ಯೋಗವೂ ಇದೆ, ಇದು ಕೂಡಾ ಅನೇಕ ರಾಶಿಚಕ್ರಗಳಿಗೆ ಲಾಭದಾಯಕವಾಗಿದೆ. ನಿಮ್ಮ ರಾಶಿಚಕ್ರಕ್ಕೆ ಸಂಬಂಧಪಟ್ಟಂತೆ ಈ ದಿನ ಹೇಗಿರಲಿದೆ ಎನ್ನುವುದನ್ನು ಇಂದಿನ ರಾಶಿಫಲದಲ್ಲಿ ನೋಡಿ.

 • ರಾಹು- ಕೇತು ಗೋಚಾರ ಫಲ: ಧನು ರಾಶಿಯವರಿಗೆ ಹೇಗಿರಲಿದೆ ಗೊತ್ತಾ ರಾಹು-ಕೇತು ಫಲ..!
  on September 19, 2020 at 12:09 pm

  ಛಾಯಾಗ್ರಹಗಳಾದ ರಾಹು ಮತ್ತು ಕೇತು ಇದೇ ತಿಂಗಳು 23ರಿಂದ ತನ್ನ ಸಂಚಾರ ಆರಂಭಿಸಲಿವೆ. 2022ರ ಏಪ್ರಿಲ್ 12ರವರೆಗೆ ಅಂದರೆ 18 ತಿಂಗಳ ಕಾಲ ಈ ಪರಿಭ್ರಮಣೆ ನಡೆಯಲಿದೆ. ಮಿಥುನ ಹಾಗೂ ಧನು ರಾಶಿಯಲ್ಲಿರುವ ರಾಹು ಮತ್ತು ಕೇತು ಕ್ರಮವಾಗಿ ವೃಷಭ ಮತ್ತು ವೃಶ್ಚಿಕ ರಾಶಿಗೆ ಸಂಚರಿಸುತ್ತವೆ. ರಾಹು ಧನುರಾಶಿಯಿಂದ 6ನೇ ಮನೆಯಲ್ಲಿದ್ದರೆ, ಕೇತುವು 12ನೇ ಮನೆಯಲ್ಲಿರುತ್ತಾನೆ. ರಾಹು ಮತ್ತು ಕೇತು ಸಂಚಾರದ ಅವಧಿ ನಿಮಗೆ ಭರವಸೆಯ ಕಾಲವಾಗಿದೆ. ಆದರೂ ನೀವು ಎಚ್ಚರಿಕೆಯಿಂದ ಇರುವುದು ಉತ್ತಮ. ನೀವು ಕೈ ಹಾಕಿದ ಕೆಲಸಗಳು ಈಡೇರುತ್ತವೆಯಾದರೂ ನೀವು ಹೆಚ್ಚು ದಾನ ಮಾಡಿ ನಷ್ಟಕ್ಕೆ ಒಳಗಾಗುವಿರಿ. ರಾಹು ಕೇತು ಗೋಚಾರಫಲದ ಇನ್ನಷ್ಟು ಮಾಹಿತಿ ಈ ಕೆಳಗಿದೆ ನೋಡಿ.

 • ರಾಹು – ಕೇತು ಗೋಚಾರ ಫಲ: ವೃಶ್ಚಿಕ ರಾಶಿಗೆ ರಾಹು ಕೇತುವಿನ ಶುಭ-ಅಶುಭ ಫಲಗಳು
  on September 19, 2020 at 7:05 am

  ಸೆಪ್ಟೆಂಬರ್ 23ರಿಂದ 2023ರ ಏಪ್ರಿಲ್‌ವರೆಗೆ ರಾಹು ಮತ್ತು ಕೇತು ಸಂಚಾರ ನಡೆಸಲಿದ್ದು, ಈ ಛಾಯಾಗ್ರಹಗಳು ಕ್ರಮವಾಗಿ ಮಿಥುನ ಮತ್ತು ಧನುರಾಶಿಯಿಂದ ವೃಷಭ ಮತ್ತು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿವೆ. ಈ ವೇಳೆ ರಾಹುವು ವೃಶ್ಚಿಕ ರಾಶಿಯ ಏಳನೇ ಮನೆಯಲ್ಲಿದ್ದರೆ ಕೇತುವು ಮೊದಲ ಮನೆಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಅದಕ್ಕೂ ಮುನ್ನ ರಾಹು ಕೇತುವಿನ ಹಿನ್ನೆಲೆ. ಎರಡೂ ಗ್ರಹಗಳ ಪ್ರಾಮುಖ್ಯತೆಯನ್ನು ತಿಳಿಯೋಣ.

 • ಮನೆಯಲ್ಲಿ ರಾಹುವಿನ ಸ್ಥಾನ ಇಲ್ಲಿರುತ್ತದೆ..! ಈ ಸ್ಥಳವನ್ನು ಸ್ವಚ್ಛವಾಗಿಡಲು ಮರೆಯದಿರಿ..
  on September 18, 2020 at 1:13 pm

  ಶನಿಯಂತೆ ರಾಹು ಕೂಡ ಕ್ರೂರಗ್ರಹವೆಂದು ಕರೆಯಲ್ಪಡುತ್ತಾನೆ. ಒಮ್ಮೆ ರಾಹು ನಿಮ್ಮ ಮನೆಯ ಮೇಲೆ ದೃಷ್ಟಿ ಹಾಯಿಸಿದರೆ, ನಿಮ್ಮ ಮನೆಯಲ್ಲಿ ನಕಾರಾತ್ಮಕತೆ ಆವರಿಸುವುದು ಗ್ಯಾರಂಟಿ. ಇದು ನಿಮ್ಮ ಮನೆಯ ಸದಸ್ಯರ ಆರೋಗ್ಯ ಮತ್ತು ಪ್ರಗತಿಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ರಾಹುವಿನ ಪ್ರಭಾವದಿಂದ ಹಣದ ಕೊರತೆ ಹಾಗೂ ವೈವಾಹಿಕ ಜೀವನದಲ್ಲಿಯೂ ಸಮಸ್ಯೆಗಳು ಕಾಡತೊಡಗುತ್ತವೆ. ವಾಸ್ತುವಿನ ಪ್ರಕಾರ ಮನೆಯಲ್ಲಿರುವ ಕೆಲವೊಂದು ಸ್ಥಳಗಳು ರಾಹುವಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತದೆ. ಹಾಗಾಗಿ ಕೆಲವೊಂದು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

 • ಮಾರ್ಗಿಯಾಗಿ ಸಂಚರಿಸಲಿರುವ ಶನಿ: ಈ ಐದು ರಾಶಿಗಳಿಗೆ ಕೂಡಿ ಬರಲಿದೆ ಶುಭ ಕಾಲ..!
  on September 18, 2020 at 6:49 am

  ಬರಲಿರುವ ಅಕ್ಟೋಬರ್ ತಿಂಗಳು ಕೆಲವು ರಾಶಿಗಳಿಗೆ ಆಶಾ ಕಿರಣವನ್ನು ಮೂಡಿಸಲಿದೆ. ಸೆಪ್ಟೆಂಬರ್‌ 23 ರಂದು ರಾಹು ಕೇತು ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಸೆಪ್ಟೆಂಬರ್ 29ರಂದು ಶನಿಯ ಚಲನೆ ಬದಲಾಗಲಿದೆ. ತನ್ನದೇ ರಾಶಿಯಾದ ಮಕರದಲ್ಲಿ ವಕ್ರಿಯಾಗಿದ್ದ ಶನಿ ನೇರವಾಗಿ ಅದೇ ರಾಶಿಯಲ್ಲಿ ಸಂಚರಿಸಲಾರಂಭಿಸುತ್ತಾನೆ. ಇದರಿಂದ ದ್ವಾದಶ ರಾಶಿಗಳಲ್ಲಿ ಕೆಲವೊಂದು ರಾಶಿಗಳ ಮೇಲೆ ಧನಾತ್ಮಕ ಪರಿಣಾಮ ಉಂಟಾಗಲಿದೆ. ಶನಿ ತನ್ನ ಸಂಚಾರ ಆರಂಭಿಸುವಾಗಲೇ ರಾಹು ಮತ್ತು ಕೇತು ಸ್ಥಾನ ಪಲ್ಲಟರಾಗುತ್ತಾರೆ. ಇದರಿಂದಾಗಿ ಪ್ರಮುಖವಾಗಿ ಐದು ರಾಶಿಯವರು ತಮ್ಮ ಸಮಸ್ಯೆಗಳಿಂದ ಮುಕ್ತರಾಗಲಿದ್ದು ಅವರಿಗೆ ಒಳ್ಳೆಯ ಕಾಲ ಬರುತ್ತದೆ. ಈ ಐದು ರಾಶಿಗಳಿಯವರು ಆದಾಯ ಹೆಚ್ಚಿಸಿಕೊಳ್ಳುವ ಹಾಗೂ ಲಾಭ ಗಳಿಸುವ ಸಾಧ್ಯತೆಗಳೂ ಇವೆ. ಯಾವುದು ಆ ಐದು ರಾಶಿಗಳು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ

RSS
Follow by Email