ನೆರೆ ಪ್ರವಾಹ ಪರಿಹಾರ ಘೋಷಣೆಗೆ ನೀತಿ ಸಂಹಿತೆ ಅಡ್ಡಿ: ಹಿಂದಿನ ಮಾನದಂಡವೇ ಆಧಾರ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರ್ಕಾರ ಯಾವುದೇ ಹೊಸ ಯೋಜನೆ ಘೋಷಿಸುವಂತಿಲ್ಲ, ಹೀಗಾಗಿ ಮಳೆ ಪರಿಹಾರಕ್ಕಾಗಿ ಇರುವ ಪರಿಹಾರ ಯೋಜನೆಯನ್ನು ಸರ್ಕಾರ ವಿಸ್ತರಿಸಿದೆ.

ಕಳೆದ ವಾರ ಅಧಿಕ ಮಳೆಯಿಂದ ನಾಲ್ಕು ಜಿಲ್ಲೆಗಳಲ್ಲಿ ಅಪಾರ ಮಳೆಯಾಗಿದೆ, ಕಲಬುರಗಿ, ಯಾದಗಿರಿ, ರಾಯಚೂರು, ಮತ್ತು ವಿಜಯಪುರ ಜಿಲ್ಲೆಗಳ ಸಂತ್ರಸ್ತರಿಗೆ ಈ ವರ್ಷದ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ನೀಡಿದ ಪರಿಹಾರ ಮಾನದಂಡವನ್ನು ಈಗಲೂ ಮುಂದುವರಿಸಲಾಗುತ್ತದೆ.

ಎಸ್‌ಡಿಆರ್‌ಎಫ್ / ಎನ್‌ಡಿಆರ್‌ಎಫ್ ಮಾನದಂಡಗಳ ಅಡಿಯಲ್ಲಿ ಪ್ರವಾಹದಿಂದ ಬಳಲುತ್ತಿರುವ ಪ್ರತಿಯೊಂದು ಕುಟುಂಬಕ್ಕೂ ರೂ.3,800 ತಕ್ಷಣದ ನಗದು ಪರಿಹಾರವಾಗಿ ಪಡೆಯಲು ಅರ್ಹತೆ ಇದೆ, ಆದರೆ ರಾಜ್ಯ ಸರ್ಕಾರವು ಇದನ್ನು 6,200 ರಷ್ಟು ಹೆಚ್ಚಿಸಿ ರೂ.10,000 ನೀಡಬೇಕಾಗುತ್ತದೆ. ರಾಜ್ಯ ಸರ್ಕಾರವೂ ಮನೆಗಳ ಪುನರ್ನಿರ್ಮಾಣಕ್ಕಾಗಿ ಪರಿಷ್ಕೃತ ಪರಿಹಾರವನ್ನೂ ವಿಸ್ತರಿಸಿದೆ, 

ಈ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ  ಹಾನಿಯಾಗಿರುವ ಮನೆಗೆ 5 ಲಕ್ಷ ರು. ಮತ್ತು ಶೇ.75ರಷ್ಟು ಹಾನಿಗೊಳಗಾದ ಮನೆಗೆ 3 ಲಕ್ಷ, ಭಾಗಶಃ ಹಾನಿಯಾದ ಮನೆಗೆ 50 ಸಾವಿರ ರು. ಪರಿಹಾರವನ್ನು ಸರ್ಕಾರ ಘೋಷಿಸಿದೆ.

Leave a Reply

Your email address will not be published. Required fields are marked *

Latest News