ಮಂಗಳೂರು, ಜೂನ್.13 : ಕೋವಿಡ್ ಲಾಕ್‌ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ನಾಟಕ ಕಲಾವಿದ ರಿಗೆ ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್ ಇವರ ವತಿಯಿಂದ ಆಹಾರ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಶನಿವಾರ ಕದ್ರಿಯ ಗೋಕುಲ್ ಸಭಾಭವನದಲ್ಲಿ ಜರುಗಿತು.
ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ನಡೆದ ಕಾರ್ಯಕ್ರಮದಲ್ಲಿ ನಾಟಕವನ್ನೆ ನಂಬಿ ಬದುಕುತ್ತಿದ್ದು, ಇದೀಗ ಹಲವಾರು ತಿಂಗಳ ಕಾಲ ಕೋವಿಡ್ ಲಾಕ್‌ಡೌನ್ ನಿಂದಾಗಿ ಯಾವೂದೇ ನಾಟಕಗಳಿಲ್ಲದೇ ಅರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸುಮಾರು 425 ಮಂದಿಗೆ ಆಹಾರ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.
ಲಯನ್ಸ್ ಉಪ ರಾಜ್ಯಪಾಲ ವಸಂತ ಶೆಟ್ಟಿ, ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್ ಇದರ ಅಧ್ಯಕ್ಷ ಗೋಕುಲ್ ಕದ್ರಿ, ನಿಕಟ ಪೂರ್ವ ಅಧ್ಯಕ್ಷ ಲಯನ್ ಕಿಶೋರ್ ಡಿ ಶೆಟ್ಟಿ, ಉಪಾಧ್ಯಕ್ಷ ಮೋಹನ್ ಕೊಪ್ಪಳ, ಲ.ಲಕ್ಷ್ಮಣ್ ಮಲ್ಲೂರ್, ಲ. ತಾರಾನಾಥ್ ಶೆಟ್ಟಿ ಬೋಳಾರ, ಲ. ನವನೀತ ಶೆಟ್ಟಿ ಕದ್ರಿ, ಲ. ಗೋವರ್ಧನ್ ಶೆಟ್ಟಿ, ಲ. ಪ್ರದೀಪ್ ಆಳ್ವ,ಲ. ಮೋಹನ್ ಬರ್ಕೆ, ಲ. ಚಂದ್ರಹಾಸ ಶೆಟ್ಟಿ, ಲ. ಶ್ರೀಮತಿ ಸ್ವರೂಪ ಶೆಟ್ಟಿ, ಲ.ವೆಂಕಟೇಶ್ ಎಂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.