ಸಂತ ಆಂತೋನಿ ಆಶ್ರಮ ಜೆಪ್ಪು : ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವ

ಮಹಾಮಾರಿ ‘ಕೋವಿಡ್ 19’ ನಿಯಂತ್ರಿಸಲು ಎಲ್ಲರೂ ಎಲ್ಲರೊಡನೆ ಕೈ ಜೋಡಿಸುವ : ಬಿಶಪ್

ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನರವರು ಸಂತ ಆಂತೋನಿಯವರ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಸಂಭ್ರಮದ ಬಲಿಪೂಜೆ ಅರ್ಪಿಸಿದರು.

ಬಿಶಪರು ತಮ್ಮ ಪ್ರವಚನದಲ್ಲಿ, ಸಂತ ಆಂತೋನಿಯವರು ಮೂವತ್ತಾರು ವರ್ಷದ ತಮ್ಮ ಅಲ್ಪ ಅವಧಿಯ ಜೀವನದಲ್ಲಿ ದೇವರ ರಾಜ್ಯಕ್ಕಾಗಿ ನಿರಂತರ ದುಡಿದರು. ಹಸಿವು, ಬಾಯಾರಿಕೆ ಮತ್ತು ದಣಿವೆನ್ನದೆ ಮೈಲುಗಟ್ಟಲೆ ಕಾಲ್ದಾರಿಯಲ್ಲಿ ನಡೆದು ಯೇಸುಸ್ವಾಮಿಯ ಸುವಾರ್ತೆಯನ್ನು ಸಾರಿದರು.

ತಮ್ಮ ಜೀವನದಲ್ಲಿ ದೇವರ ಸಾಮಿಪ್ಯ ಎಷ್ಟು ಅನುಭವಿಸಿದರೆಂದರೆ ಧ್ಯಾನದಲ್ಲಿ ತಲ್ಲಿನರಾದಾಗ ಯೇಸುಸ್ವಾಮಿ ಅವರ ಅಂಗೈಯಲ್ಲಿ ಪ್ರತ್ಯಕ್ಷರಾಗುತ್ತಿದ್ದರು. ಅವರ ಜೀವನ ಜನರಿಗೆ ಮೆಚ್ಚುಗೆಗೆ ಮತ್ತು ದೇವರ ಪ್ರೀತಿಗೆ ಪಾತ್ರವಾಗಿತ್ತು. ಆದ್ದರಿಂದ ಅವರು ನಿಧನರಾದ ಒಂದೇ ವರ್ಷದೊಳಗೆ ಅವರನ್ನು ಸಂತರೆಂದು ಘೋಷಿಸಲಾಯ್ತು.

ಸ್ವರ್ಗಸ್ಥರಾದ ಬಳಿಕ ದೇವರಲ್ಲಿ ಅವರ ಕೋರಿಕೆ ಬಹಳ ಪ್ರಭಲವಾದುದು. ಏನಾದರೂ ವಸ್ತು ಕಳೆದುಹೋದ ಸಂದರ್ಭದಲ್ಲಿ ಸಂತ ಆಂತೋನಿಯವರನ್ನು ಮೊರೆ ಇಟ್ಟು ಪ್ರಾರ್ಥಿಸಿದಾಗ ಸಂತ ಆಂತೋನಿಯವರು ತಮ್ಮ ಭಕ್ತರನ್ನು ನಿರಾಶೆ ಮಾಡದೆ ಕಳೆದುಹೋದ ವಸ್ತುಗಳನ್ನು ಸಿಗುವಂತೆ ಮಾಡುತ್ತಾರೆ. ಸಂತ ಆಂತೋನಿ ಯವರ ಮುಖಾಂತರ ಸಿಗುವ ಉಪಕಾರಗಳನ್ನು ನೋಡಿ ಭಕ್ತಾಧಿಗಳು ಸಂತ ಆಂತೋನಿಯವರನ್ನು ಪವಾಡ ಪುರುಷರೆಂದೇ ಸಂಭೋದಿಸುವುದುಂಟು.

ಈ ಮಹಾನ್ ಸಂತರ ವಾರ್ಷಿಕ ಹಬ್ಬವನ್ನು ಆಚರಿಸುವಾಗ ನಾವು ಅವರ ಕೋರಿಕೆಯ ಮುಖಾಂತರ ದೇವರಲ್ಲಿ ಪ್ರಸ್ತುತ ಎಲ್ಲೆಡೆ ಹರಡಿರುವ ಮಹಾಮಾರಿ ಕೋವಿಡ್ ಕಾಯಿಲೆ ಅತೀ ಶಿಷ್ರದಲ್ಲಿ ಪ್ರಪಂಚದಿಂದ ದೂರ ಸರಿಯಲಿ ಮತು ಈ ಕಾಯಿಲೆಯಿಂದ ಜನರಿಗೆ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸುವ ಎಂದು ಹೇಳಿದರು. ಹಾಗೂ ಈ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಎಲ್ಲರೂ ಎಲ್ಲರ ಜೊತೆ ಕೈ ಜೋಡಿಸುವ ಎಂದು ಕರೆ ಕೊಟ್ಟರು.

ಸಂತ ಆಂತೋನಿವರ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ‘ಯುನೈಟೆಡ್ ಕ್ಯಾಥೊಲಿಕ್ಸ್’ ಪೇಜ್‌ಬುಕ್ ಇವರು ಸಂತ ಆಂತೋನಿಯವರ ಜೀವನದ ಮೇಲೆ ಕ್ವಿಜ್ ಸ್ಪರ್ದೆ ನಡೆಸಿದ್ದರು. ಸರಿಯಾದ ಉತ್ತರ ಕಳುಹಿದವರಲ್ಲಿ ಅದೃಷ್ಟ ಚೀಟಿ ಎತ್ತುವ ಮೂಲಕ ಬಿಶಪರು ವಿಜೇತರನ್ನು ಘೋಶಿಸಿದರು.

ಆಶ್ರಮದ ಪಾಲಕರ ವಾರ್ಷಿಕ ಹಬ್ಬ ಆಚರಿಸುತ್ತಿರುವಾಗ ಆಶ್ರಮ ವತಿಯಿಂದ ಬಿಶಪರು ಅಗತ್ಯದಲ್ಲಿದ್ದವರಿಗೆ ಆಹಾರ ಸಾಮಾಗ್ರಿ ವಿತರಿಸಿದರು. ಸಂಸ್ಥೆಯ ನಿರ್ದೇಶ ಫಾ. ಒನಿಲ್ ಡಿ’ಸೋಜರವರು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿದ ಎಲ್ಲರನ್ನೂ ವಂದಿಸಿದರು. ಸಹಾಯಕ ನಿರ್ದೇಶಕರಾದ ಫಾ. ರೋಶನ್ ಡಿ’ಸೋಜರವರು ನೊವೇನ ಪ್ರಾರ್ಥನೆ ನಡೆಸಿಕೊಟ್ಟರು.

Posted in Uncategorized

Leave a Reply

Your email address will not be published. Required fields are marked *

Latest News